Monday 28 April 2008

ಭಾವವೆಂಬ ಹೂವು ಆರಳಿ..

ನಮ್ಮ ಜೀವನದ ಕೆಲವು ಮರೆಯಲಾಗದ ನೆನಪುಗಳು ನಮ್ಮ ಸ್ಮೃತಿಪಟಲದಲ್ಲಿ ಯಾವಾಗಲು ಅಡಗಿರುತದೆ. ಕೆಲವು ನೆನಪುಗಳು ಮನದ ಪುಟಗಳಲ್ಲಿ ಉಳಿದರೆ ಕೆಲವು ನಾವು ತೆಗೆದ ಭಾವಚಿತ್ರಗಳಲ್ಲಿ, ಆಟೋಗ್ರಾಫ್ ಬುಕ್‌ಗಳಲ್ಲಿ ಬಚ್ಚಿಕೊಂಡಿರುತ್ತದೆ. ಬಿಡುವಿನ ವೇಳೆಯಲ್ಲಿ ಅಥವಾ ಆಕಸ್ಮತಾಗಿ ಇದು ಕಣ್ಣಿಗೆ ಬಿದ್ದು ಆದರ ಪುಟಗಳನ್ನುತಿರುವುತ್ತಾ ಹೋದಂತೆ ನಾವು ಕಳೆದು ಕೊಂಡಿರುವದನೆಲ್ಲ ಪುನಹ ಪಡೆಯುತಿರುವ ಭಾವ ಉಮ್ಮಳಿಸಿ ಬರುತ್ತದೆ. ಕಾಲೇಜಿನಲ್ಲಿ ಗೆಳೆಯ/ಗೆಳೆತಿಯೊಂದಿಗೆ ಕಾರ್ಯಕ್ರಮಗಳಲ್ಲಿ, ಬೀಳ್ಕೊಡಿಗೆ ಸಮಾರಂಬದಲ್ಲಿ ತೆಗಿಸಿ ಕೊಂಡ ಚಿತ್ರಗಳು ಮನಸನ್ನು ಹಿತವಾಗಿ ಕಂಪಿಸುತ್ತದೆ. ಆ ಮದುರವಾದ ನೆನಪುಗಳು, ನಿಮ್ಮ ಸ್ನೇಹಿತರ ಪ್ರೀತಿಯ ಬರವಣಿಗೆಗಳು ಇವೆಲ್ಲ ನಿಮ್ಮನ್ನು ಅವರೊಂದಿಗೆ ಮಾನಸಿಕವಾಗಿ ಸಂದಿಸುವಂತೆ ಮಾಡುತದೆ.ನಾನು ಹೀಗಿದ್ನ? ಇಲ್ಲಿ ನಿಂತೀರೋ ಹುಡುಗಿ ನೇ ಅಲ್ವಾ ನಾನು ಇಷ್ಟ ಪಡ್ತಾ ಇದ್ದಿದು, ಇವಾಗ ಹೇಗಾಗಿರಬಹುದು? ಎಂದು ನೆನಸಿಕೊಳ್ಳುತ ಮರೆಯಾದ ವ್ಯಕ್ತಿಗಳೊಂದಿಗೆ ಆತ್ಮೀಯವಾಗುತ್ತಾ ಹೋಗುತೇವೆ.
ನಾವು ಕಳೆದ ಆ ದಿನಗಳು, ನಾವು ನಡೆದು ಬಂದ ಆ ಹಾದಿ, ನಾವು ಸವೆಸಿದ ರಸ್ತೆ, ನಾವು ಕೂರುತಿದ್ದ ಕ್ಲಾಸ್ ರೂಮು, ಹುಡುಗೀರ ನೋಡಿಕೊಂಡು ಕೂರುತಿದ್ದ ಟೀ ಅಂಗಡಿ ಎಲ್ಲವೂ ಒಂದು ಸ್ಪೆಶಲ್ ಎಫೆಕ್ಟ್ ಸಿನೆಮಾ ತರ ನಮ್ಮ ಕಣ್ಣ ಮುಂದೆ ಬಂದು ಹೋಗುತದೇ. ಹೀಗೆ ಭಾವನೆಗಳ ಸಾಗರದಲ್ಲಿ ಆಳವಾಗಿ ಮುಳುಗಿ ಹೊರಬಂದು ಆಲ್ಬಮ್ ಮುಚ್ಚುವಾಗ ನಿಮ್ಮ ಕಣ್ಣುಗಳು ತುಂಬಿ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.

1 comment:

Unknown said...

Hi Sandeep,
Nimma Bloggnalli eshtondu 'Interesting' aagiro bhavanegalanna vyaktapadsidira. Avannella ododakke khushi ansutte. Nanage free time iddaga ella odtini. Ivattashte nanu nimma blog nodiddu.

But, certainly, I've enjoyed reading "Bhavavemba Huvu Arali"

Vandanegalu!!
Santosh