Tuesday, 29 April 2008

ಈ ಪ್ರೀತಿ ಒಂಥರ ತಲೆ ಬಿಸಿ...


ನಮ್ಮ ಲವರ್ ಬಾಯ್ ಗುಂಡಾ ಯಾಕೋ ತುಂಬಾ feel ಮಾಡ್ಕೊಂದಿದ್ದ ಇವತ್ತು. ಈ ಲವ್ವು ಹೀಗೇರಿ. ಕರೆಕ್ಟ್ ಟ್ರಾಕ್ಕ್ ಅಲ್ಲಿ ಇದ್ರೆ ರಾಜಧಾನಿ ಎಕ್ಸ್‌ಪ್ರೆಸ್ ತರ ಒಡ್ತಾ ಇರತ್ತೆ,ಇಲ್ಲ ಅಂದ್ರೆ ಸ್ಕ್ರ್ಯಾಪ್ ಆಗಿರೋ ಗೂಡ್ಸ್ ರೈಲ್‍ಗಿಂತ ಕರಾಬ್ ಆಗ್‌ಬಿಡತೆ. "Differences of opinion" ಒಂದು ತುಂಬಾ ಮುಖ್ಯವಾದ ಕಾರಣ ಈ ಪ್ರೇಮಿಗಳ ಕಿತಾಟಕ್ಕೆ. ಒಂದು ಟಿ.ವಿ ರಿಮೋಟ್ ಕಂಟ್ರೋಲ್ ನಂತ ಚಿಕ್ಕ ವಿಷಯದಿಂದ ಹಿಡೆದು ನಿಮ್ಮ ಬಾಳಿನ ಒಂದು ಅತಿ ಮುಖ್ಯವಾದ ಸ್ಟೇಜ್ ನಲ್ಲೂ ಕೂಡ ಇದು ನಿಮ್ಮ ನಡುವೆ ಬೃಹದಕಾರದ ಗೋಡೆಯಾಗಿ ನಿಲ್ಲಬಹುದು. ಇದಕ್ಕೆ ಪರಿಹಾರ ನಿಮ್ಮಲೇ ಇರುವುದೇ ಹೊರತು ಯಾವ ಮೂರನೇ ವ್ಯಕ್ತಿಯೊಂದಿಗೆ ಆಗಲಿ ನಿಮ್ಮ ಸ್ನೇಹಿತರೊಂದಿಗೆ ಆಗಲಿ ಇಲ್ಲ. ಗುಂಡನ ಕೇಸ್ ಅಲ್ಲಿ ಆಗಿರೋದು ಇದೆ. ಗುಂಡ ಫೋನ್ ಮಾಡ್ತಾನೇ, ಅವಳು ಫೋನ್ಯೆತೊದಿಲ್ಲ -- Missed Call. ಅವಳು ಫೋನ್ ಮಾಡ್ತಾಳೆ, ಗುಂಡ ಫೋನ್ ಕಟ್ ಮಾಡ್ತಾನೇ--Disconnected Call. ಆಮೇಲೆ ಸ್ವಲ್ಪ ದಿನ ಕೋಪದಿಂದ ಇಬ್ರೂ ಫೋನ್ ಮಾಡೋದಿಲ್ಲ--No Call. ಗುಂಡ ಫ್ರೀ ಇದ್ದಾಗ ಅವಳಿಗೆ ಆಫೀಸ್, ಅವಳು ಫ್ರೀ ಇದ್ದಾಗ ಗುಂಡನಿಗೆ ರಿಲೀಸ್. ಇಬ್ರೂ ಹಾಗೂ ಹೀಗೂ ಫ್ರೀ ಮಾಡ್ಕೊಂಡು ಎಲ್ಲ ಸೆಟಲ್ ಮಾಡ್‌ಕೋಳೋಣ ಅಂತ ಇರ್ತಾರೆ ಅನ್ನಿ, there works the murphy's laws. ಗುಂಡನ ಅಪ್ಪ ಇವನಿಗೆ ಯಾವುದೋ ಕಿತ್ತೊಗಿರೊ ಕೆಲಸ ಕೊಟ್ಟು ಚಿಕ್ಕಪೆಟೆ ಗೆ ಕಳಿಸ್ತಾರೆ. ಅಲ್ಲಿಂದ ಬರೋ ಅಷ್ಟರಲ್ಲಿ ಇವನ ಮೈಮೇಲೆ 1 ಕೆ.ಜಿ ಮಣ್ಣು, ಅರ್ಧ ಕೆ.ಜಿ ಧೂಳು. ಅವಳೋ ಬುಗಲ್ ರಾಕ್ ಅಲ್ಲಿ ಕಾದು ಕಾದು ಜೊಳ ಸುಡೋ ಕೆ0ಡದಷ್ಟು ಕೆಂಪಾಗಿ ಮನೆಗೆ ಹೋಗಿರ್ತಾಳೆ. ಮತ್ತೆ ಅದೇ ಸೈಕಲ್ ರಿಪೀಟ್. ಇದಕ್ಕೆ ಏನು ಪರಿಹಾರ?


"One should understand each other and try to compromise" ಇದು ತುಂಬಾ ಸಿಂಪಲ್ ಅನಿಸಬಹುದು ಆದರೆ ಇದೆ ಫ್ಯಾಕ್ಟ್. ಹೀಗೆ ಸ್ವಲ್ಪ ಫಾರ್ಮಲ್ ಅಡ್ವೈಸ್ ಕೊಟ್ಟು, ಮಾತಾಡಿ ಸರಿ ಮಾಡ್‌ಕೋಳೋ ಗುಂಡಾ ಅಂದೇ. ಈ ಲವ್ ಮಾಡೋರು ಯಾವಾಗ ಮೆಂಟಲ್ ಆಗೋಗ್ತಾರೋ ಗೊತ್ತಿಲ....ಒಂದೋಂದ್ಸಾಲ ಹುಚ್ಚು ನಾಯಿ ಕಚಿದ್ದ ಹಾಗೆ ಆಡ್ತಾರೆ. ಇಷ್ಟೊಂದು ಕಥೆ ಹೊಡಿ ಬೇಡ ಹೋಗೋ ಲೇ..ನಿನಗೇನೂ ಗೊತ್ತು ಪ್ರೀತಿ ಅಂದ್ರೆ...ಹುಡುಗಿ ಇದ್ರೆ ಗೊತ್ತಾಗಿರೋದು, ಅವಳನ್ನ miss ಮಾಡ್ಕೊಂಡಿದ್ರೆ? ಅವಳು ನಿನ್ನ ಬಿಟ್ಟು ಹೋಗಿದ್ರೆ? ಎನ್ ಹೇಳ್ತಾ ಇದ್ದೇ ನೀನು?? ಹೇಳು ನೋಡೋಣ??ಅಂತ ಸ್ವಲ್ಪ ರಫ್ ಆಗಿ ಹೇಳ್ದ. ಒಂದು ನಿಮಿಷ ಸ್ವಲ್ಪ ಬ್ಲ್ಯಾಂಕ್ ಆದೇ.


"ಪ್ರೀತಿ ಇಂದ ಸಿಗುವ ಸುಖ ಕ್ಷಣಿಕ..ಆದರೆ ಅದರಿಂದ ದೊರೆಯುವ ನೋವು ಮಾತ್ರ ಜೀವನ ದಲ್ಲಿ ನಿರಂತರ...ಈ ಸತ್ಯ ತಿಳಿದೂ ನಿನ್ನನ ಪ್ರೀತಿಸಿದೆ...ಪ್ರತಿ ದಿನವೂ,ಪ್ರತಿ ನಿಮಿಷವೂ,ಪ್ರತಿ ಕ್ಷಣವೂ ನಿರಂತರ ನೋವು ಅನುಬವಿಸುತ್ತಾ ಬಂದಿದೀನಿ...ಅದೇನೆಂದರೆ ನಿನ್ನ ಆಗಳಿಕೆ...ನೀನು ನನ್ನನ ಇಂದು, ನಾಳೆ, ಎಂದೆಂದೂ ಪ್ರೇಮಿಸದೇ ಹೋಗಬಹುದು ಆದ್ರೆ ನನ್ನ ಪ್ರೀತಿ ನಿನ್ನಲ್ಲಿ ಎಂದೆಂದಿಗೂ ಅನಂತ...ನಿನ್ನ ಪ್ರೀತಿ ನನ್ನ ಕೊಲ್ಲುವ ವರೆಗೆ"


ಅಂತ ಹೇಳಿ ಗುಂಡನಿಗೆ ಹೇಳ್ದೆ


"ಪ್ರೀತಿ ನ ಅರ್ಥ ಮಾಡಿಕೊಳ್ಳುವುದಕ್ಕೆ ಹುಡುಗಿ ಇರಬೇಕಾಗಿಲ್ಲ ಕಣೋ ಮೂರ್ಖ....ಹೃದಯ ಇದ್ರೆ ಸಾಕು"

No comments: