Sunday, 25 May 2008

ಕರಾಬ್ ಟೈಮ್

ಇವತ್ತು ಹಾಗೆ ಆನ್ಲೈನ್ ಕನ್ನಡ ನ್ಯೂಸ್ ಪೇಪರ್ ಅಲ್ಲಿ ನನ್ನ ಜಾತಕದ ತಿಂಗಳ ಜ್ಯೋತಿಷ್ಯ ಫಲ ನೋಡ್ತಾ ಇದ್ದೆ. ಅದರ ಒಂದು ಇಣುಕು ನೋಟ.

  • ಭಾಗ್ಯ ಸ್ಥಾನದಲ್ಲಿ ನೀಚ ಶನಿ, ಕೌಟುಂಬಿಕ ಅಶಾಂತಿ { permanent ಆಗಿ ಅಲ್ಲೇ settle ಆಗ ಬೇಡಪ್ಪಾ}
  • ದಂತಗಳಿಗೆ ಕಾರಕ {ಯಾರೋ ಹಲ್ಲು ಮುರಿತಾರೆ ಅನ್ಸತ್ತೆ}
  • ಹಿರಿಯ ಬಂದುಗಳೊಂದಿಗೆ ವಿರಸ {ಯಾರಿದಾರೆ ಈ ದೇಶದಲ್ಲಿ ಹಿರಿಯ ಬಂದುಗಳು ವಿರಸ ಆಗೋದಕ್ಕೆ}
  • ಎಣ್ಣೆ ಪದಾರ್ಥಗಳ ಸೇವನೆ ಇಂದ ಅನಾರೋಗ್ಯ {ಎಣ್ಣೆ ಇಂದ ದೂರ ಇರಬೇಕು}
  • ಸಾಲದ ಬಾಧೆ ಕಾಡಿಸುವುದು {ಗೊತ್ತಿರೋ ವಿಷಯನೆ ಬಿಡಿ}
  • ಏಳರಲ್ಲಿ ರವಿ , ದೇಶಾಂತರ ಸಂಚಾರ {ಇವಾಗ ಆಗ್ತ ಇರೋದು ಏನು ದೇಶದ ಒಳಗಿನ ಸಂಚಾರನ?}
  • ಒಂಬತರಲ್ಲಿ ಕುಜ, ಆರ್ಥಿಕ ನಷ್ಟ {ಯಾವಾಗಲು ಇರತ್ತೆ ಬಿಡಿ}
  • ಗೋವುಗಳ ಸೇವೆ ಇಂದ ಉದ್ಯೋಗದಲ್ಲಿ ಜಯ {ಹಸುನ ಎಲ್ಲಿ ಹುಡುಕಿ ಕೊಂಡು ಹೋಗಲಿ ಈ ದೇಶದಲ್ಲಿ}
  • ಗೃಹ ನಿರ್ಮಾಣ, ಆಸ್ತಿ ಖರೀದಿ {ತುಂಬ ವರ್ಷಗಳಿಂದ scheme ಆಗ್ತಾ ಇದೆ , ನೋಡೋಣ}
  • ತೀರ್ಥ ಯಾತ್ರೆ ನಿರ್ದಾರ {UK ಲಿ ತೀರ್ಥ ಯಾತ್ರೆನ?}
  • ನಿರೀಕ್ಷಿತ ಮೂಲಗಳಿಂದ ಸಾಲ ಪಡೆಯುವುದು ಅಸಂಬವ {ನಮ್ಮ ಮುಖಕ್ಕೆ ಯಾರು ಕೊಡ್ತಾರೆ ಬಿಡಿ ಸಾಲ}
  • ಲೇವ ದೇವಿ ವ್ಯವಹಾರದಲ್ಲಿ ಜಯ {ಸಾಲ ಸಿಗದೆ ಹೋದರೆ ಲೇವದೆವಿನೆ ಗತಿ ಅಲ್ವಾ?}
  • ಅಗ್ನಿ ಮಾನ್ದ್ಯ {ದೇವರಾಣೆಗಲು ಇದು ಏನು ಅಂತ ಅರ್ಥ ಆಗ್ತ ಇಲ್ಲ, ಆದರೆ ಇದೂ ಯಾವುದೊ scheme ಅನ್ಸತ್ತೆ}
  • ಪತ್ನಿಯ ಆಶ್ವಾಸನೆ ಇಂದ ಹುಮ್ಮಸು {ಮದುವೆನೇ ಆಗಿಲ್ಲಾ, ಇನ್ನು ಪತ್ನಿ ಎಲ್ಲಿಂದ}

ತಾರಬಲ , ಚಂದ್ರಬಲ ,ಪಂಚಕಬಲ ,ಗುರುಬಲ ಎಲ್ಲಾ ವೀಕ್ ಆಗಿದೆ . ಕರಾಬ್ ಟೈಮ್ ಅಂದ್ರೆ ಇದೆ ನೋಡಿ.

No comments: