ಸ್ವಲ್ಪ ದಿನಗಳಿಂದ ಆಫಿಸ್ನಿಂದ ಮನೆಗೆ ಹೋಗೋ ಟೈಮ್ ಅಲ್ಲಿ ಒಂದು ಇಂಡಿಯನ್ ದಂಪತಿಗಳು ವಾಕಿಂಗ್ ಹೋಗೋದನ್ನ ಗಮನಿಸುತಿದ್ದೆ . ಆರೋಗ್ಯದ ಮೇಲೆ ಅದೆಷ್ಟು ಕಾಳಜಿ ಅಂತೀರಾ ಆ ಹುಡುಗಿಗೆ. ಅವಳ ಗಂಡ ಬೇಡ ಅಂದರು ಬಲವಂತವಾಗಿ ವಾಕಿಂಗ್ ಮಾಡಿಸ್ತಾಳೆ ಅನ್ಸತ್ತೆ . ಅವನಿಗೋ ಒಳ್ಳೆ ಬಾರ್ ಅಲ್ಲಿ ಕೂತ್ಕೊಂಡು ಎರಡು ಬಾಟಲ್ ಬೀರ್ ಹೊಡೆಯೋ ಮನಸು. ಅವನು bachelor ಲೈಫ್ ಅಲ್ಲಿ ಕುಡಿದ ಬೀರ್ quantity ಅವನ ಹೊಟ್ಟೆನೇ ಹೇಳತ್ತೆ. ಇವಾಗ ಹೆಂಡತಿ ಕಂಟ್ರೋಲ್ ಮತ್ತೆ ಆರ್ಡರ್. ಹೊಟ್ಟೆ ಕರಗಿಸಲೇ ಬೇಕು. ಉಸ್ಸಪಾ ಯಾರಿಗೆ ಬೇಕು ಈ ವಾಕಿಂಗ್ ಅನ್ನೋ ಹಾಗೆ ಅವಳ ಹಿಂದೆ ಹೋಗ್ತಾ ಇರ್ತಾನೆ. "She Leads the Show" ಗಂಡನೊಂದಿಗೆ ವಾಕಿಂಗ್ ಹೋಗೋದನ್ನ ಒಂದು ಕಡೆ ಇಡಿ. ಅದೇ ಹುಡುಗಿ ನಾನು ಬೆಳ್ಳಗೆ ಆಫಿಸ್ಗೆ ಹೋಗೋ ಟೈಮ್ ಅಲ್ಲಿ ನಾಯಿ ಜೊತೆ ವಾಕಿಂಗ್ ಹೋಗುತಾ ಇರ್ತಾಳೆ. ಬೆಳ್ಳಗೆ ನಾಯಿಯೊಂದಿಗೆ ವಾಕಿಂಗ್, ಸಂಜೆ ಗಂಡನೊಂದಿಗೆ ವಾಕಿಂಗ್!!!! ಏನಿರಬಹುದು ಇದರ ಪರಿ?
ಇಬ್ಬರನ್ನು ಸಮಾನ ದೃಷ್ಟಿ ಇಂದ ನೋಡುವ ಇವಳ ನೀತಿಗೆ ಹ್ಯಾಟ್ಸ್ ಆಫ್.
Thursday, 15 May 2008
Subscribe to:
Post Comments (Atom)
No comments:
Post a Comment