Sunday, 4 May 2008

ಆಪರೇಶನ್ ಖೆಡ್ಡಾ


*****ನನ್ನ ಸ್ನೇಹಿತರಾದ ಜಗ್ಗ ಹಾಗು ರಮ್ಯಾಳ ಸಮ್ಮತಿಯೊಂದಿಗೆ *****

ಸುಮಾರು ಆರು ವರ್ಷದ ಹಿಂದಿನ ಮಾತು. ಆಗಷ್ಟೇ ಇಂಜಿನಿರಿಂಗ್ ಮುಗಿಸಿ ಒಂದು ಚಿಕ್ಕ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದೆ. ನನ್ನ ಕಾಲೇಜಿನ ಜೀವನದ ಸೆಕಂಡ್ ಪಾರ್ಟ್ ಅಂತ ಹೇಳಬಹುದು. ಅದೇ ಮಜಾ , ಅದೇ ಮಸ್ತ್ ಫ್ರೆಂಡ್ಸ್ ಗ್ಯಾಂಗ್.

ಒಂದಿನ ಹೀಗೆ ಟೀ ಟೈಮ್ ಅಲ್ಲಿ ನನ್ನ ಸ್ನೇಹಿತರ ಜೊತೆ ಹರಟುತಾ ಇದ್ದೆ ,ನನ್ನ ದೋಸ್ತ್ ಜಗ್ಗ ಸೇನ್ಸಶನಲ್ ನ್ಯೂಸ್ ಕೊಟ್ಟ. ಮಗ ಆಫಿಸ್ಗೆ ಹೊಸ ಬೇಬಿ ಸೆರ್ಕೊಂಡಿದಾಳೆ..ಮಸ್ತ್ ಆಗಿದಾಳೆ...ಆದ್ರೆ ಬೇಜಾನ್ ನಕ್ರ ಮಗ.ಅವಳಿಗಿರೊ ಜಂಬಾನ 10 ಜನ ಹುಡುಗೀರಿಗೇ ಹಂಚಬಹುದು ಅಂದ. ಸುಂದರವಾದ ಹುಡುಗಿಗೆ ಜಂಬವಲ್ಲವೇ ಆಭರಣ ಅಂದ್ಕೊಂಡು , ಎನ್ ಮಗ ಹೆಸರು? ಯಾವ ಡಿವಿಶನ್ ಅಂದೇ? ಹಾಗೋ ಹೀಗೋ ಕಲೆಕ್ಟ್ ಮಾಡಿರೋ ಚೂರು ಪಾರು ಇನ್ಫೊ ಕೊಟ್ಟ
ಹೆಸರು: ರಮ್ಯ
ಪ್ರಾಜೆಕ್ಟ್: C ಡೆವಲಪ್ಮೆಂಟ್
ಏನು use ಇಲ್ಲ ಬಿಡಮ್ಮ, ಬೇಜಾನ್ ಡೋಂಟ್ ಕೇರ್ ಹುಡುಗಿ ಅವಳು ಅಂತ lite ಆಗಿ ಒಂದು ವಾರ್ನಿಂಗ್ ಬೇರೆ ಕೊಟ್ಟ. ಈ ತರ ಬೇಜಾನ್ ಹುಡುಗೀರನ್ನ ನೋಡಿದೀನಿ ಬಿಡೋ, ಇವಾಗೇನು ಅವಳನ್ನ ಹೋಗಿ ಮಾತಡಿಸಬೇಕ? ಎನ್ ಬೆಟ್ಟಿಂಗ್ ಅಂತ ಕೇಳ್ದೆ. ಬೆಟ್ಟಿಂಗ್ ಅಂದ ತಕ್ಷಣ ಜಗ್ಗ ಬೆಟ್ ನ complicated ಮಾಡ್ತಾ ಹೋದ. ಅವನ conditions,
೧. ನೀನು ಹೋಗಿ ಅವಳನ್ನ ಕಾಲೇಜಿನ ಸ್ಟೈಲ್ ಅಲ್ಲಿ ಮಾತಡಿಸೋದು ಓಲ್ಡ್ ಫ್ಯಾಶನ್ ಆಗೋಯ್ತು, ಸಾಫ್ಟ್ವೇರ್ ಸ್ಟೈಲ್..ಅವಳೇ ಬಂದು ಮಾತಾಡಿಸೋ ಹಾಗೆ ಮಾಡ್ಬೇಕು.
೨. ಯಾರ ಹೆಲ್ಪು ತಗೋ ಬಾರದು.
೩. ನೀನು ಗೆದ್ದರೆ 250 ರುಪಾಯಿ ಮತ್ತೆ ಇವತ್ತು ರಾತ್ರಿ ಡಿನ್ನೆರ್ ನಾನು ಕೊಡಿಸ್ತೀನಿ, ಇಲ್ಲ ಅಂದರೆ ನೀನು ಕೊಡಿಸಬೇಕು.
೪. ಇವಾಗ ಮೂರು ಗಂಟೆ, ನಿನಗೆ ಐದು ಗಂಟೆ ವರೆಗೂ ಟೈಮ್.
Deal ಓಕೆ ನ?
ಬಡ್ಡಿ ಮಗ ಜಗ್ಗ ಬೇಜಾನ್ complicated ಮಾಡ್ಬಿಟ್ಟ ಇರಲಿ ಓಕೇ Deal ಅಂದೇ.
ಜಗ್ಗ ಒಂತರ comfort ಫೀಲಿಂಗ್ಅಲ್ಲಿ ಇದ್ದ. ಹೇಗೆ ಅವಳನ್ನ ಕರೆಸೋದು ಅನ್ನೋ ಯೋಚನೆಲಿ ಕೆಲ್ಸ ಮಾಡ್ತಾ ಕೂತೆ. ಮನೆಹಾಳ್ ಐಡಿಯಾ ಕಮ್ಮಿ ನ ನಮ್ಮ ತಲೇಲಿ, ಒಂದು ಐಡಿಯಾ ಫ್ಲಾಶ್ ಆಯ್ತು. UNIX root user ಆಗಿ ಲಾಗಿನ್ ಆಗಿ ಕೆಳಗಿನ command execute ಮಾಡಿದೆ.
$ echo "Operating System Files deleted by your program execution. Please contact Sandeep, Unix Adminstration at cubile 51 immediately" I
mail -s "Unix Admin Notification" ramya.b@xyz.com


ಐದೇ ನಿಮಿಷದಲ್ಲಿ ರಮ್ಯ ನನ್ನ ಮುಂದೆ ಪ್ರತ್ಯಕ್ಷ!!!!!!!!!!!!!!!!!!!!!!!!!!!ಅವಳ ನನ್ನ ಮದ್ಯೆ ನಡೆದ ಸಂಭಾಷಣೆ ಇಂಗ್ಲೀಷ್ ನಲ್ಲಿ...


Ramya: Are you Sandeep?

Me: (Pretending as if I am very busy) Yes and you?

Ramya: I am Ramya..Hi...I joined here last week.I am working as C developer.Actually I have got a mail telling some files deleted. Can you check please?

Me: (you are gone) Yeah, I got notification too. Seems like your program deleted some files in /etc directory

Ramya: I executed a small test program. I dont understand how it deleted those files. What we can do?

Me: (Controlling my laugh) This is a major incident and we may need to raise this with your line manager. This may need a system restoration.

Ramya: Oh please can you do something without involving them. I am afraid.

Me: Ok let me check..(why cant she sit) pull the chair and tell me details of the program.

Ramya: Its the program....blah blah blah (She looked cute when blabbering)

Me: (Copied some files here and there with my fast shell typing skills) Done. Actually I should not do this. Since you were afraid I did this.

Ramya: Wooow Thanks So Much Sandeep. Really you helped me a lot. I owe you a treat..(A cute smile)

Me:(Oh man she killed me with her exhilarating smile) Oh really? When?

Ramya: May be tomorrow evening? Coffee?

Me: (I usually dont miss blind dates) yes fine

Ramya: Bye

Me: Bye

ಹತ್ತು ದಿನದಿಂದ ಹಸಿವಾಗಿರೋ ಹುಲಿ ಜಿಂಕೆ ಮೇಲೆ ಬೀಳೊ ಹಾಗೆ ಜಗ್ಗ ನನ್ನ ಮೇಲೆ attack ಮಾಡಿದ. ಲೇ ಚಪ್ಪರ್ ಏನೋ ಮಾಡಿದೆ ಹೇಳೋ? ಹೇಗೆ ಬಂದ್ಲು ಅವಳು ನಿನ್ ಹತ್ರ? ಎನ್ ಮಾತಾಡ್ತಾ ಇದ್ದೇ ಇಷ್ಟು ಹೊತ್ತು? ಅಂತ ನೂರು questions ಕೇಳ್ದ. ಅವನ ಯಾವ ಪ್ರಶ್ನೆ ಗು ಉತ್ತರ ಕೊಡದೇ ಜಗ್ಗನಿಗೆ ಹೇಳ್ದೆ

ಜಗ್ಗ 9 ಗಂಟೆ ಗೆ ಶಾಂತಿ ಸಾಗರ್ ಅಲ್ಲಿ dinner. ಪರ್ಸ್ ಅಲ್ಲಿ ದುಡ್ಡು ಇಲ್ಲ ಅಂದ್ರೆ ಇದೆ ರೋಡ್ ಎಂಡ್ ಅಲ್ಲಿ ATM ಇದೆ.

No comments: