Tuesday, 6 May 2008

ಎಲ್ಲಿಗೆ ಪಯಣ, ಯಾವುದೊ ದಾರಿ, ಏಕಾಂಗಿ ಸಂಚಾರಿ


ಮೂರು ದಿನಗಳಿಂದ ಇಲ್ಲಿ ಬ್ಯಾಂಕ್ ಹಾಲಿಡೇ. ಬ್ಯಾಂಕ್ ಬ್ಯಾಲೆನ್ಸ್ ಇಲದಿರೋ ನಮ್ಮ ಲೈಫ್ ಅಲ್ಲಿ ತಿಂಗಳ 29 ದಿನಾನು ಬ್ಯಾಂಕ್ ಹಾಲಿಡೇನೆ ಬಿಡಿ , ಸಂಬಳ ಬರೋ ಒಂದು ದಿನ ಬಿಟ್ಟು . ಮೂರು ದಿನದಿಂದ ಆಫಿಸ್ಗೆ ರಜಾ .ಎಲಾದರು ಹೊರಗಡೆ ಹೋಗಿಬರೋಣ ಅಂದ್ರೆ "OnCall" ಅನ್ನೋ ಒಂದು ಬೇತಾಳ ನನ್ನ ಬೆನ್ನಿಗೆ ಅಂಟಿಕೊಂದಿರತ್ತೆ ಅವಾಗ ಅವಾಗ .ನನ್ನ ಕೆಲವು ಸ್ನೇಹಿತರು vacation ಪ್ಲಾನ್ ಮಾಡಿ ಅಲ್ಲಿ ಇಲ್ಲಿ ಹೋದರು. ಬ್ಯಾಕ್ ಅಗೈನ್ ನಾನು ಮತ್ತೆ ಏಕಾಂಗಿಯಾಗಿ ಉಳಿದೆ.

ಏಕಾಂಗಿಯಾಗಿ ಜೀವನ ನಡೆಸಿಕೊಂಡು ಹೋಗೋದು ಒಂತರ ಅಬ್ಯಾಸಾ ಆಗೋಗಿದೆ. ಆದರೆ ಯಾವುದೇ ಒಂದು ಭಾವನೆಗೆ ಮನಸಲ್ಲಿ "Exception" ಅಂತ ಇರತ್ತೆ ಅಲ್ವಾ. ಒಂದೇ ಭಾವನೆ ಹಾಗು ಮನ್ಸಸ್ಥಿಥಿಯಲ್ಲಿ ಇಡಿ ಜೀವನ ನಡೆಸಿಕೊಂಡು ಹೋಗೋದಕ್ಕೆ ಮಹತ್ಮರಾದ ಸ್ವಾಮಿ ವಿವೇಕನಂದರಿಗೂ ಆಗ್ಲಿಲ್ವಂತೆ ಇನ್ನು ನಮಗೆ ಆಗತ್ತಾ. ಇಂಡಿಯಾದಲ್ಲಿ ಇರೋ ನನ್ನ ಸ್ನೇಹಿತರಿಗೆ, ಬಂದುಗಳಿಗೆ ನಾನು UK ಲಿ ಇದೀನಿ,ಲೈಫ್ ನ ಎಂಜಾಯ್ ಮಾಡ್ತಾ ಇದೀನಿ ಅನ್ನೋ ಭಾವನೆ. ಆದರೆ ನಾನು ನನ್ನ ಮನಸನ್ನ "Am I really enjoying being inUK"? ಅನ್ನೋ ಪ್ರಶ್ನೆ ಕೇಳಿದರೆ ನನ್ನ ಮನಸು ಕಂಡಿತ ಇಲ್ಲ ಅಂತ ಇದೆ. ದೂರದ ಬೆಟ್ಟ ನುಣ್ಣಗೆ ಅಂತಾರಲ್ಲ ಹಾಗೆ. ಅಲ್ಲೀರೋರಿಗೆ ಇಲ್ಲಿನ ಜೀವನ ಚೆನ್ನಾಗಿ ಕಾಣಿಸ ಬಹುದು, ಆದರೆ ಇಲ್ಲಿ ನನ್ನ ಮನಸ್ತಿಥಿ ತೂಗುಯಾಲೆ ಅಲ್ಲಿ ತೂಗ್ತಾ ಇರತ್ತೆ. ನನಿಗೆ ಮಾತ್ರ ಹೀಗೆ ಆಗ್ತ ಇದ್ಯೋ ಇಲ್ಲ ಬೇರೆಯವರಿಗೂ ಹೀಗೆ ಆಗತ್ತೋ, ಅಥವ ಆಗ್ತ ಇದ್ರು ಹೇಳ್ಕೊಳಲ್ವೋ ಗೊತ್ತಿಲ. ಆದ್ರೆ ಈ ಮನಸ್ಥಿತಿಯನ್ನ ಬರವಣಿಗೆ ಯಲ್ಲಿ express ಮಾಡೋದು ತುಂಬ ಕಷ್ಟ ಅನಿಸ್ತ ಇದೆ. ನೀವು ಜೀವನ ದಲ್ಲಿ ಬೆಳೆಯುತಾ ಹೋದಂತೆ ನಿಮ್ಮ priorities ಬದಲಾಗ್ತಾ ಹೋಗತ್ತೆ. ಬಾಲ್ಯದಲ್ಲಿ ನಿಮ್ಮ ಜೀವನದ ಗುರಿಗಳನ್ನ ನಿಮಗಿಂತ ಹೆಚ್ಚಾಗಿ ನಿಮ್ಮ ತಂದೆ ತಾಯಂದಿರು ರೂಪಿಸಿರುತಾರೆ. ನೀವು ಆ ಗುರಿಯನ್ನ ಸೇರುವ ಒಬ್ಬ ಗುರಿಕಾರ ಮಾತ್ರ. ಆ ಸ್ಟೇಜ್ ಇಂದ ಮುಂದೆ ಬಂದು ಕಾಲೇಜಿನಲ್ಲಿ ಹೋದಾಗ ನಿಮ್ಮ priorities ಮತ್ತೆ ಬದಲಾಗತ್ತೆ. ಜೀವನ ಒಂದು ಮೋಜು ಆ ದಿನಗಳಲ್ಲಿ. ನಾನು ಎಸ್ಟು ಹುಡುಗಿಯರ attention grab ಮಾಡಿದೆ, ಯಾವ ಹುಡುಗಿ ನನ್ನ ನೋಡಿದಳು, ಇವತ್ತು ಪಾರ್ಟಿ ಎಲ್ಲಿ ಮಾಡೋದು, internals ಪೇಪರ್ ಹೇಗೆ ಡೀಲ್ ಮಾಡೋದು, practicals ಗೆ externals ಯಾರು, ಈ ತರ ಚಿಕ್ಕ ಚಿಕ್ಕ ಯೋಚನೆಯಲ್ಲಿ ನಿಮ್ಮ ಮನಸು ಮುಳಗಿ ಹೋಗುತ್ತದೆ. ಗುರಿಗಳು ಒಂದು ರೂಪ ಪಡೆಯೋದು ನಿಮ್ಮ ವೃತಿ ಜೀವನದಲ್ಲಿ. ಗುರಿಗಳು ಅನ್ನೋ ಚಿಕ್ಕ ಗಿಡ ನಿಮ್ಮ ವೃಥಿ ಜೀವನದ ಆರಂಬದಿಂದ ಚಿಗುರೋಡೆದು "Ambitions & Desires" ಅನ್ನೋ ಒಂದು ಹೆಮ್ಮರವಾಗಿ ನಿಮ್ಮ ಮುಂದೆ ನಿಂತುರುತದೆ.

ಈ ಹೆಮ್ಮರ ಕಾಣಲು ಹೊರಟ ನನಗೆ ಸಿಕ್ಕಿದ್ದು ಎರಡು ದಾರಿ. ನೋಡಲು ಎರಡು ದಾರಿನು ಸುಂದರವಾಗಿ ಕಾಣ್ತಾ ಇತ್ತು. ಮನಸು ಒಂದು ದಾರೀಲಿ ಹೋಗು ಅಂದರೆ ಹೃದಯ ಎರಡನೆ ದಾರೀಲಿ ಹೋಗು ಅಂತು. ಹೃದಯಕ್ಕೆ ಪ್ರೀತಿ, ಪ್ರೇಮ, ಅಭಿಮಾನ, ತಂದೆ, ತಾಯಿ, ಬಂದು, ಬಳಗ ಚೆನ್ನಾಗಿ ಅರ್ಥ ಆಗಿತ್ತು ಅನ್ಸತ್ತೆ. ಆದರೆ ಮನಸು ಮಾತ್ರ "Ambitions & Desires" ಅನ್ನೋ ಹೆಮ್ಮರಾನ ನೋಡುವ ತವಕದಲಿತ್ತು. ಆ ದಾರಿಯಲ್ಲಿ ನಡೀತಾ ಇಷ್ಟು ದೂರ ಬಂದಿದೀನಿ. ಮುಂದೊಂದು ದಿನ ಹೃದಯ ಹೋಗಲು ಬಯಸಿದ ದಾರಿ ಈ ದಾರಿಯೊಂದಿಗೆ ಸೇರಿಕೊಳ್ಳುತದೆ ಅನ್ನೋ ಒಂದು ಸಣ್ಣ ವಿಶ್ವಾಸ ಮಾತ್ರ ಮನಸಲ್ಲಿ ಹಾಗೆ ಉಳಿದಿದೆ. ಆ ದಾರಿ ಸಿಗುತದೆಯೋ ಇಲ್ಲವೊ ತಿಳಿದಿಲ್ಲ. ಆದರೆ ಹೃದಯ ಮಾತ್ರ "ಎಲ್ಲಿಗೆ ಪಯಣ, ಯಾವುದೊ ದಾರಿ, ಏಕಾಂಗಿ ಸಂಚಾರಿ" ಅನ್ನೋ ಹಾಡನ್ನ ಗುನುಗುಟ್ಟುತಾ ಇರುತ್ತದೆ.


No comments: