Sunday, 11 May 2008

ಹುಡುಗರು ಅತ್ತರೆ ತಪ್ಪೇ???

ತುಂಬ ದಿನಗಳಿಂದ ನನ್ನ ಸ್ನೇಹಿತನೊಬ್ಬ ಮನೆಗೆ ಬಾ ಅಂತ ಕರಿತಾ ಇದ್ದ. ಅವನು ಕನ್ನಡದವನೆ. ನಮ್ಮ ಮಲೆನಾಡಿನ ಶಿವಮೊಗ್ಗದವನು. ಕೆಲಸದ ಒತ್ತಡದಿಂದ, ಕೆಲಕಾಲ ನನ್ನ ಸೋಮರಿತನದಿಂದ ಅವನನ್ನ ಬೇಟಿಯಾಗಲು ಆಗಿರಲಿಲ್ಲ. ಇಂದು ಬೆಳ್ಳಿಗೆ ಅವನಿಂದ ಫೋನ್ ಕಾಲ್ ಬಂತು. ಯಾಕೋ ತುಂಬ ಬೇಜಾರ್ ಆಗ್ತ ಇದೆ, ನೀನು ಇವತ್ತು ಬರಲೇ ಬೇಕು ಅಂದ. ಶನಿವಾರ, ಮನೇಲೆ relax ಮಾಡೋಣ ಅಂತ ಇದ್ದೆ, ಆದರೆ ಅವನ ಮಾತಿನಲ್ಲಿ ಬೇಸರದ ದನಿ ಇತ್ತು. ಸರಿ ಬೇಗ ರೆಡಿ ಆಗಿ ರೀಡಿಂಗ್ ಸ್ಟೇಷನ್ ಇಂದ ಆಕ್ಸ್ಫಾರ್ದ್ ಟ್ರೈನ್ ಹಿಡಿದೇ. ನಿಜವಾಗಲು ತುಂಬ ಬೇಜಾರಲ್ಲಿ ಇದ್ದ. ಯಾಕೋ ಏನಾಯ್ತು? ಯಾಕೆ ಇಷ್ಟು ಡಲ್ ಆಗಿದೀಯ ಅಂದೇ. ನಾನು ಇಷ್ಟ ಪಟ್ಟ ಹುಡುಗಿಗೆ ಬೇರೆ ಅವನ ಜೊತೆ ಮಾಡುವೆ ಆಗೋಯ್ತು ಮಗ ಅಂತ ಹೇಳಿ ಅಳೋದಕ್ಕೆ ಶುರು ಮಾಡಿದ. ಒಂದು ಸೆಕಂಡ್ ಶಾಕ್ ಆದೆ. ಇಷ್ಟು sentimental ಆಗಿ ಅಳ್ತಾ ಇದೀಯಲ್ಲೋ, ಹುಡುಗಿ ತರ ಸುಮ್ಮನಿರು ಎಂದೆ. ಯಾಕೋ ಗೊತ್ತಿಲ ಕಣೋ ಅವಳನ್ನ ಮರೆಯೊದಕ್ಕೆ ಆಗ್ತ ಇಲ್ಲ. ಎಲ್ಲ ಸರಿ ಹೋಗತ್ತೆ ಬಿಡು, ಅವಳಿಗಿಂತ ಒಳ್ಳೆ ಹುಡುಗಿ ಸಿಗ್ತಾಳೆ, "You deserve the best" ಅನ್ನೋ ಒಂದೆರಡು ಕಾಮನ್ ಲವ್ ಫೈಲುರ್ cheer up ಡೈಲಾಗು ಹೊಡೆದು ಅವನನ್ನ ಸಮಾದಾನ ಮಾಡಿದೆ. ಹಾಗೆ ಅವನನ್ನ ವಾಕ್ ಗೆ ಕರೆದು ಕೊಂಡು ಹೋಗಿ ಸಂಜೆಯ ವರೆಗೂ ಅವನ ಜೊತೆ ಇದ್ದು, ಮತ್ತೆ ಸಿಗ್ತೀನಿ, ಜಾಸ್ತಿ ತಲೆ ಕೆಡಿಸಿಕೊಬೇಡ ಅಂತ ಹೇಳಿ ವಾಪಾಸ್ ರೀಡಿಂಗ್ ಟ್ರೈನ್ ಹಿಡಿದೇ.

ಯಾಕೋ ಬೆಳ್ಳಗೆ ನಾನು ಅವನಿಗೆ ಹೇಳಿದ ಒಂದು ಮಾತು ಮನಸನ್ನ ಕಾಡೋಕೆ ಶುರು ಮಾಡಿತು. "ಇಷ್ಟು sentimental ಆಗಿ ಅಳ್ತಾ ಇದೀಯಲ್ಲೋ, ಹುಡುಗಿ ತರ" ಅನ್ನೋ ಲೈನ್. ಅಳು ಅನ್ನೋ ಒಂದು ಮನಸಿನ ಉತ್ಕೃಷ್ಟ ಬಾವನೆ ಕೇವಲ ಹುಡುಗಿಯರಿಗೆ ಮಾತ್ರ ಮೀಸಲೇ? ಹಾಗೇನೂ ಇಲವಲ್ಲ, ಈ ಮನಸಿನ ಬಾವನೆಯನ್ನು ಯಾರು ಬೇಕಾದರು ತೋರಿಸ ಬಹುದಲ್ವ. ನೋವನ್ನು ಮನಸಿನಿಂದ ಹೊರ ಹಾಕುವ ಸಾದನವೇ ಈ ಅಳು. ಹುಡುಗಿಯರಿಗೆ ಈ ಸಾದನವನ್ನು ಬಳಸಿಕೊಳ್ಲೋ ಅದಿಕಾರ ಈ ಸಮಾಜ ಸ್ವತಂತ್ರವಾಗಿ ನೀಡಿದೆ. ಆದರೆ ಅದೇ ಸಾದನ ಹುಡುಗ ಬಳಸಲು ಹೋದರೆ ಸಮಾಜ ನೋಡುವ ದೃಷ್ಟಿಯೇ ಬೇರೆ. ಅಳ್ತಾ ಇದೀಯಲ್ಲೋ weak minded coward , ಹೆಣ್ನಪ್ಪಿ ಹೀಗೆಲಾ ಏನೇನೊ ಪದವಿ ಕೊಟ್ಟು ಬಿಡುತ್ತದೆ. ಇಷ್ಟೆಲ್ಲಾ ಯಾಕೆ, "ನಗೋ ಹೆಂಗಸರನ್ನ, ಅಳೋ ಗಂಡಸರನ್ನ ನಂಬ ಬಾರದು" ಅನ್ನೋ ಗಾದೆ ಮಾತೆ ಹುಟ್ಟಿಲ್ವಾ ಈ ಸಮಾಜದಲ್ಲಿ. ಹುಡುಗನ ಎಲ್ಲಾ ಬಾವನೆಯನ್ನು expect ಮಾಡುವ ಹುಡುಗಿ ಅದೇ ಹುಡುಗ ಅತ್ತರೆ ಹಾಸ್ಯದಿಂದ ಆಥವಾ ನಾಟಕೀಯ ಅನ್ನೋ ಹಾಗೆ ನೋಡುವ ಹಾಗೆ ಆಗೊಗತ್ತೆ. ಒಂದು ಚಿಕ್ಕ ಹುಡುಗಿ ಬಿದ್ದು ಪೆಟ್ಟು ಮಾಡಿ ಕೊಂಡು ಅಳುತಾ ಬಂದರೆ ಅಪ್ಪ , ಅಮ್ಮ ,ಅಜ್ಜ ,ಅಜ್ಜಿ ಎಲರು ಆ ಮಗುವನ್ನ ಸಮದಾನ ಪಡಿಸಿ, ಮುದ್ದು ಮಾಡಿ bandaid ಹಾಕ್ತಾರೆ. ಅದೇ ಒಂದು ಚಿಕ್ಕ ಹುಡುಗ ಬಿದ್ದು ಬಂದರೆ ? ಬಿದ್ದು ಬಂದ್ಯಾ?ದಿನ ದಿನ ನಿನ್ನ ಚೇಷ್ಟೆ ಜಾಸ್ತಿ ಆಗ್ತ ಹೋಯ್ತು. ಅಳು ನಿಲಿಸು ಅಷ್ತೊಂದೆನು ಪೆಟ್ಟಾಗಿಲ್ಲ. "Be strong , Be Brave" ಅಂತ ಲಘುವಾಗಿ ಗದರಿಸುತಾರೆ. ಈ ಬಾವನೆಯನ್ನು ಮುಚ್ಚಿಕೊಳುವ ಮನೋಬಾವ ಬೆಳೆಯುವುದೇ ಅಲ್ಲಿಂದ. ಅದೇ ಮನೋಬಾವದಲ್ಲಿ ಬೆಳೆದು ಬಾವನೆಯನ್ನು ಮನಸಿನಲ್ಲಿ ಗುಟ್ಟಾಗಿ ಅದುಮಿಟ್ಟು ಕೊಂಡು ಹೋಗುತಾರೆ ಹುಡುಗರು. ನೋಡೊರಿಗೆ "Men are mentally strong" ಅನ್ಸತ್ತೆ ಆದರೆ ಇದು strongness ಅಲ್ಲ, "Emotional Suppression". ಈ ನೋವು ಹಿಡಿದಿತ್ತುಕೊಳುವ ಮನೋಬಾವ ಯಾವ ಸ್ಟೇಜ್ ಗೆ ಹೋಗತ್ತೆ ಅಂದ್ರೆ ಕೆಲವೊಮ್ಮೆ ಅಳಬೇಕು ಅಂದರು ಅಳು ಬರದ ಮಟ್ಟಿಗೆ.

Men are so Strong, so Certain, and so Lost.
They have everything (Emotion,Love,Feeling,Affection) but they are able to show nothing

ಇಷ್ಟೆಲ್ಲಾ ಯೋಚನೆ ಮಾಡಿ, ನಾನು ಬುದ್ದಿ ಬಂದ ಮೇಲೆ ಯಾವಾಗ ಅತ್ತಿದೆ ಅಂತ ಹಾಗೆ ಲೈಫ್ ಕ್ಯಾಸೆಟ್ ನ rewind ಮಾಡಿದೆ..

ಐದು ವರ್ಷದ ಹಿಂದೆ, ನನ್ನ ಪ್ರೀತಿಯ ನಾಯಿ ಮೊನಿ ಆಕ್ಸಿಡೆಂಟ್ ಅಲ್ಲಿ ಕೊನೆ ಉಸಿರೆಳದಾಗ...

No comments: