Showing posts with label Poetry. Show all posts
Showing posts with label Poetry. Show all posts

Monday, 28 July 2008

ರಂಗೋಲಿ

ಒಲುಮೆಯ ಗೆಳತಿಗೆ ನಲ್ಮೆಯ ಅರ್ಪಣೆ


ನನ್ನ ಜೀವನದ ಅಂಗಳದಲ್ಲಿ ಸ್ನೇಹದ ರಂಗೋಲಿಯನ್ನು ಹಾಕಿದ ಒಲುಮೆಯ ಗೆಳತಿ ನೀನು...ಈ ರಂಗೋಲಿಗೆ ಬಣ್ಣ ತುಂಬುವ ಶಕ್ತಿ ನನ್ನಲ್ಲಿ ಇದೆಯೋ ಇಲ್ಲವೊ ತಿಳಿಯದು.. ಆದರೆ ಗೆಳತಿ, ವಿರಸದ ಜಡಿ ಮಳೆಗೆ ಕೊಚಿ ಹೋಗದಂತೆ ಕಾಪಡುವೆನು ಈ ರಂಗೋಲಿಯನ್ನು ಜೀವನದ ಪ್ರತಿ ಕ್ಷಣದಲ್ಲೂ...

Tuesday, 29 April 2008

ಕೋಪವೋ? ದುಖ:ವೋ?


ಕೋಪವೋ ದುಖ:ವೋ ಅರ್ಥವಾಗುತಿಲ್ಲ ಚಿನ್ನ...
ಕೋಪವೋ ದುಖ:ವೋ ಅರ್ಥವಾಗುತಿಲ್ಲ ಚಿನ್ನ...
ಏನೇ ಆಗಲಿ ನಿನ್ನ ಮೊಗಕ್ಕೆ ಎರಡೂ ಚೆನ್ನ...

Thursday, 24 April 2008

ಮಿಂಚು ಹುಳು

ನೀ ಬಂದೆ ನನ್ನ ಬಾಳಿಗೆ ಮಿಂಚು ಹುಳುವಾಗಿ..
ಪ್ರೀತಿಸಿದೆ ನಿನ್ನ ಬಹಳ ಆಳವಾಗಿ..
ಹಿಡಿಯಲು ಹೋದಾಗ ಗೋಚರಿಸಿದೆ
ದೂರದ ಆಕಾಶದಲ್ಲಿ..
ಕೈಗೆ ಸಿಗದ ನಕ್ಷತ್ರವಾಗಿ..

Wednesday, 16 April 2008

ಸಾಕ್ಷಿ...

ಸೂರ್ಯನ ಒಲವಿಗೆ ಅರಳುವ ಹೂವುಗಳೇ ಸಾಕ್ಷಿ
ಚಂದ್ರನ ಒಲವಿಗೆ ಸಾಗರದಲೆಗಳೇ ಸಾಕ್ಷಿ
ಮಳೆಯ ಒಲವಿಗೆ ಕುಣಿವ ನವಿಲೆ ಸಾಕ್ಷಿ
ನನ್ನ ಒಲವಿಗೆ ನಿನ್ನ ಸುಂದರ ಜೀವನವೇ ಸಾಕ್ಷಿ