Thursday, 24 April 2008

ಆನ್‌ಲೈನ್ ಫ್ಯೂನರಲ್

ಇವತ್ತು ತುಂಬಾ ದಿನಗಳಿಂದ ಡಿಲೆ ಮಾಡ್ತಾ ಇದ್ದ ಹೇರ್ ಕಟ್ ಪ್ರೋಗ್ರಾಮ್ ನ ಮುಗಿಸ್ಲೆ ಬೇಕು ಅಂತ ಆಫೀಸ್ ಇಂದ ಬೇಗ ಮನೆಗೆ ಬಂದೆ. ಇಲ್ಲಿ ಹೇರ್ ಕಟ್ ಒಂದು ದೊಡ್ಡ ಪ್ರೋಗ್ರಾಮ್. ನಾಲ್ಕು ಗಂಟೆ ಮೇಲೆ ಕಟ್ಟಿಂಗ್ ಶಾಪ್ ತೆಗ್ದಿರೋದಿಲ್ಲ. ಹಾಗೋ ಹೀಗೋ ಬೇಗ ಡ್ರೆಸ್ ಚೇಂಜ್ ಮಾಡಿಕೊಂಡು ಜಿಮ್ಮೀ ಯ ಕಟ್ಟಿಂಗ್ ಶಾಪ್ ಗೆ ಹೋದೆ. ಇದಿದ್ದು ಇಬ್ರು ಆಫ್ರಿಕನ್ಸ್. ಕೂದಲೇ ಇರಲ್ಲ ನನ್ ಮಕ್ಲಿಗೆ, ಕಟ್ಟಿಂಗ್ ಮಾತ್ರ ಒಂದು ಗಂಟೆ ಮಾಡ್ತಾರೆ. ಕಾದು ಕಾದು ಬೇಜಾರ್ ಆಗಿ ಅಲ್ಲೇ ಇದ್ದ ಒಂದು ಬ್ರಿಟಿಷ್ ನ್ಯೂಸ್ ಪೇಪರ್ ಓದ್ತಾ ಕೂತೆ. ತಕ್ಷಣ ನನ್ನ ಕಣ್ಣಿಗೆ ಬಿದ್ದ ಸ್ವಾರಸ್ಯವಾದ ನ್ಯೂಸ್ ಅಂದ್ರೆ ಆನ್‌ಲೈನ್ ಫ್ಯೂನರಲ್. ಆನ್‌ಲೈನ್ ಬ್ಯಾಂಕಿಂಗ್ ಕೇಳಿದ್ದೆ, ಆನ್‌ಲೈನ್ ಎಂಗೇಜ್ಮೆಂಟ್ ಕೇಳಿದ್ದೆ, ಆನ್‌ಲೈನ್ ಮದುವೆ ಕೂಡ ಕೇಳಿದ್ದೆ, ಆನ್‌ಲೈನ್ ಫ್ಯೂನರಲ್ ಆ ಅಂದು ಕೊಂಡು ಫುಲ್ ನ್ಯೂಸ್ ಓದ್ತಾ ಕೂತೆ..

ದುಡ್ಡು ಕೊಡಿ, ತಿಥಿಯ ನೇರಪ್ರಸಾರ ನೋಡಿ!!!! ಇದು ಇಲ್ಲಿನ ಬಿಸ್ನೆಸ್ ಲೋಕದ ಹೊಸ ಮಂತ್ರ. ಸಂಬಂದಿಕರ ಶವಸಂಸ್ಕಾರವನ್ನು ವೆಬ್ ಕಾಮೆರ ಮೂಲಕ ಇಂಟರ್‌ನೆಟ್ ಅಲ್ಲಿ ತೋರಿಸ್ತಾರೆ. ಮದುವೆ ವೀಡಿಯೋ ಮಾಡಿದಂತೆ ಶವಸಂಸ್ಕಾರದ ವೀಡಿಯೋ ಕೂಡ ಮಾಡಿ ವೆಬ್‌ಸೈಟ್ ಅಲ್ಲಿ ನೇರ ಪ್ರಸಾರ ಮಾಡುತಾರೆ. ಇದನ್ನು ನೋಡಲು ನೀವು ದುಡ್ಡು ಕೊಟ್ಟು ಲೊಗಿನ್ ಆಗಬೇಕು. ಸಾವಿನ ಸಿನಿಮಾ ಒಂದು ವಾರ ಅಲ್ಲೇ ಇರತ್ತೆ. ಸ್ವರ್ಗ ದಲ್ಲೋ, ನರಕದಲ್ಲೋ ಇಂಟರ್‌ನೆಟ್ ಲೈನ್ ಇದ್ರೆ ಸತ್ತೋಗಿರೋನು ಅವನ ಶವಸಂಸ್ಕಾರವನ್ನು ನೋಡಬಹುದು. ತಿಥಿಯ ಡಿ.ವಿ.ಡಿ ಕೂಡ ಬರ್ನ್ ಮಾಡಿ ಕೊಡ್ತಾರಂತೆ.

ಅಂತಿಮ ಯಾತ್ರೆ ನು ಬಿಸ್ನೆಸ್ ಮೈಂಡೆಡ್ ಆಗೊಯ್ತಾಲ್ಲ ಅಂತ ಯೋಚನೆ ಮಾಡ್ತಾ ಹೇರ್ ಕಟ್ ಚೇರ್ ಮೇಲೆ ಕೂತ್ಕೊಂದೆ.. ಜಿಮ್ಮೀ ಯ ಕತ್ತರಿ ನನ್ ಮೈಂಡ್ ಅಷ್ಟೇ ಫಾಸ್ಟ್ ಆಗಿ ಕಟ್ಟಿಂಗ್ ಮಾಡಕ್ಕೆ ಶುರು ಮಾಡಿತು.

No comments: