Sunday, 20 April 2008

ಲಾಕ್ ನೆಸ್



ಅದೇ ಹಿಮ, ಅದೇ ಫರ್ ಗಿಡಗಳು, ಅದೇ ಸೆಬುಗೆನ್ನೆಯ ಸುಂದರಿ ಯರು , ಮುಟ್ಟಿದರೆ ರಕ್ತ ಜಿಲ್ಲೆನುವ ಕೆಂಪು ಕೆನ್ನೆಯ ಮುಗ್ದ ಮಕ್ಕಳು, ಒಣಗಿ ನಿಂತ ಮರಗಳು,ಮುಗಿಲ ಯೆತ್ತೆರದ ಪರ್ವತಗಳ ಮದ್ಯೆ ತಣ್ಣಗೆ ನಿಂತಿರುವ ನೆಸ್ ಸರೋವರ, ತಟ್ಟನೆ ಕಾಣಿಸುವ ವಿಸ್ಕೀ ಷಾಪ್‌ಗಳು, ಇತಿಹಾಸದ ನೆನಪುಗಳನ್ನು ಕೆದಕುವಹಳೆಯ ಕ್ಯಾಸಲ್ ಗಳು. ಇದೆ ನಾನು ನೋಡಿದ ಲಾಕ್ ನೆಸ್ ಹಾಗೂ ಲಾಕ್ ಲೋಮಂಡ್.


ಗ್ಲ್ಯಾಸ್ಕೋ ಇಂದ ೩೦೦ ಮೈಲಿ ದೂರದಲಿರುವ ಈ ತಾಣ ರುದ್ರರಮಣೀಯ. ಈ ಸುಂದರ ಪ್ರದೇಶದಲ್ಲಿ ನನಗೆ ಕಾಡಿದ ಒಂದೇ ಪ್ರಶ್ನೆ, ನೆಸೀ ಎಂಬ ಪ್ರಾಣಿಯಇರುವಿಕೆ. ಈ ನೆಸೀ ಯನ್ನು "ಲಾಕ್ ನೆಸ್ ಮಾನ್ಸ್ಟರ್" ಎಂದು ಕರೆಯುತಾರೆ. ಇದರ ಇರುವಿಕೆಯನ್ನು ಧೃಡ ಪಡಿಸುವ ಆದಾರಗಳು ಇಲ್ಲಿ ಬಹಳ ಕಡಿಮೆ.ಈ ನೆಸೀ ಯನ್ನು ಪ್ರತಮ ಬಾರಿಗೆ ಲಂಡನ್ ಉದ್ಯಮಿ ಜಾರ್ಜ್ ಸ್ಪೈಸರ್ 4 ಆಗಸ್ಟ್ 1933 ಗಮನಿಸಿದ್ದು.ನೆಸ್ ಸರೋವರದಲ್ಲಿ ಅವನ ಪತ್ನಿಯೊಂದಿಗೆ ಪ್ರಯಾಣಿಸುತ್ತಿದಾಗ ಡ್ರ್ಯಾಗನ್ ರೂಪದ ಈ ಪ್ರಾಣಿ ಯನ್ನು ಆತ ಕಂಡ. ಇದಾದ ಕೆಲೆವೆ ದಿನಗಳಲ್ಲಿ ಪ್ರಾಣಿಶಾಸ್ತ್ರದಕೆಲವು ವಿದ್ಯಾರ್ಥಿ ಗಳು ಇದನ್ನು ನೆಸ್ ಸರೋವರದಲ್ಲಿ ಕಂಡರು. ಅಂದಿನಿಂದ ಈ ಪ್ರಾಣಿ ಗೆ ಅಂತಾರಾಷ್ಟ್ರೀಯ ಮನ್ನಣೆಯೆನೊ ದೊರೆಯಿತು, ಆದರೆ ಅದರ ಬೆನ್ನಲ್ಲೇ ಇದರ ಇರುವಿಕೆಯ ಬಗ್ಗೆ ಸಾವಿರಾರು ಅನುಮಾನಗಳು, ವಿವಾದಗಳು ಸೃಷ್ಟಿಗೋಂಡವು. ಹಲವಾರು ವಿಜ್ಞಾನಿಗಳು ಅದುನಿಕ ಉಪಕರಣದೊಂದಿಗೆ ನೆಸ್ ಸರೋವರದಲ್ಲಿ ನಡೆಸಿದ ಶೋಧ ಹುಡುಕಾಟಗಳು ನೆಸ್ಸಿ ಯ ಇರುವಿಕೆಯ ಬಗ್ಗೆ ಯಾವುದೇ ಧೃಡವಾದ ಸಾಕ್ಷಿಯನ್ನು ಒದಗಿಸದೇ ಹೋದವು. ನೆಸ್ ಸರೋವರದಲ್ಲಿ ನಾನು ಕಳೆದ ಕೇವಲ ಒಂದು ಗಂಟೆ ಯಲ್ಲಿ ತುಂಬಾ ಆಶಾವಾದಿಯಾಗಿ ನಾನು ನೆಸೀ ಯ ಕಾಣಲು ಬಯಸಿ ನಿರಾಶನಾದೆ. ಬಸ್ಸು ವೇಗವಾಗಿ ಗ್ಲ್ಯಾಸ್ಕೋ ಕಡೆಗೆ ಸಾಗ ತೊಡಗಿತ್ತು. ಮನಸು ಮಾತ್ರ ನೆಸೀ ಯ ಯೋಚನೆ ಯಲ್ಲಿ ಮುಳಗಿತ್ತು....

No comments: