Monday, 15 February 2010
ನಂಬಿಕೆ
ಲಾಸ್ ಅಂಜೆಲಸಲ್ಲಿ ಇರುವ ಈ ನಾಯಿಯ ಹೆಸರು "Faith". ಇವಳಿಗೆ ಎರಡೇ ಕಾಲು. ಹುಟ್ಟಿದಾಗಲೇ ಎರಡೂ ಕಳು ಇರಲಿಲ್ಲ.ಇವಳನ್ನು ಹೆತ್ತ ಅಮ್ಮ ಇವಳನ್ನು ತಿರಸ್ಕರಿಸಿದಳು. ಅದೃಷ್ಟವಶಾತ್ ಈ ನಾಯಿಯ ಪಾಲಿಗೆ ದೇವರು ಒಬ್ಬ ಮಾಜಿ ಸೇನಾಪಡೆಯ ಯೋದನ ರೂಪದಲ್ಲಿ ಬಂದ,ಹೆಸರು ಜೂಡ್. ಎರಡು ಕಾಲಿಲ್ಲದೇ ಬದುಕುವುದೇ ಒಂದು ಸವಾಲಾಗಿರುವ Faith ಗೆ ಜೂಡ್ ನಡೆದಾಡುವುದನ್ನು ಕಲಿಸಿದ.Faith ಈಗ ನಡೆದಾದುವುದಿರಲಿ ಜೊತೆಯಲ್ಲಿ ಹಲವಾರು ಕಸರತ್ತುಗಳನ್ನು ಮಾಡುತಾಳೆ.ಅಂಗವಿಕಲತೆ ಮೀರಿ ನಿಂತ Faith ಯೋದರು ಹಾಗು ಅಂಗವಿಕಲ ಮಕ್ಕಳಲ್ಲಿ ಒಂದು ಹೊಸ ನಂಬಿಕೆಯನ್ನು ಚಿಗುರಿಸಿದಾಳೆ. ಅಂಗವಿಕಲತೆ ಶಾಪವಲ್ಲ ಎಂದು ಜಗತ್ತಿಗೆ ಸಾರಿ ಸಾರಿ ಹೇಳುತಿದಾಳೆ. ಜೀವನದ ಪ್ರಯಾಣದಲ್ಲಿ ನಾವು ನಡೆಯುವಾಗ ಎದುರಾಗುವ ಕತ್ತಲೆಗೆ ನಂಬಿಕೆಯೊಂದೇ ಬೆಳಕು ನೀಡುವ ಸಾಧನ. ನಂಬಿಕೆಯೊಂದಿಗೆ ನಮ್ಮ ಜೀವನದ ಪ್ರಯಾಣವನ್ನು ಮಾಡಿದಾಗ ಗೆಲುವು ನಮ್ಮದಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
Subscribe to:
Post Comments (Atom)
No comments:
Post a Comment